ಅಗ್ನ್ಯಬಾಧಿತ ವಸ್ತ್ರ

 ಮುಖ್ಯವಾಗಿ ಯುದ್ಧ ಕಾಲದಲ್ಲಿಯೂ ನಿತ್ಯದಲ್ಲಿ ಅಗ್ನಿಶಾಮಕ ದಳದವರಿಗೂ ಅವಶ್ಯಕ. ಇದರ ತಯಾರಿಕೆಯಲ್ಲಿ ಉಪಯೋಗಿಸುವ ಕೆಲವು ಮುಖ್ಯವಸ್ತುಗಳೆಂದರೆ; ಫಾಸ್‍ಫೇಟ್, ಸಲ್ಫೇಟ್ ಮತ್ತು ಬೊರೇಟ್ ಲವಣಗಳು; ತವರ, ಆಂಟಿಮೊನಿ, ಸತುವಿನ ಲವಣಗಳು ಮತ್ತು ಕೆಲವು ಕೃತಕ ರಾಳಗಳು (ರೆಸಿನ್ಸ್) - ಇವೇ ಮೊದಲಾದುವು. ಈ ವಸ್ತುಗಳಲ್ಲಿ ಕೆಲವನ್ನು ಮಿಶ್ರಣ ರೂಪದಲ್ಲಿಯಾಗಲೀ ಬೇರೆ ಬೇರೆಯಾಗಿಯಾಗಲೀ ಸೂಕ್ತಪ್ರಮಾಣದಲ್ಲಿ ವಸ್ತ್ರಗಳ ಮೇಲೆ ಲೇಪಿಸಬೇಕು. ಲವಣಗಳನ್ನು ಕರಗಿಸಿದ ದ್ರಾವಣದಲ್ಲಿ ಬಟ್ಟೆಗಳನ್ನು ಅದ್ದುವುದರಿಂದಲೂ ಸಿಂಪಡಿಸುವುದರಿಂದಲೂ ಬಳಿಯುವುದರಿಂದಲೂ ಅವುಗಳನ್ನು ಅಗ್ನ್ಯಬಾಧಿತ ವಸ್ತ್ರಗಳನ್ನಾಗಿ (ಫೈರ್‍ಪ್ರೂಪ್ó ಕ್ಲಾತ್) ಮಾಡಬಹುದು.

 ಹೀಗೆ ತಯಾರಾದ ಈ ವಸ್ತ್ರಗಳು ಅವುಗಳಲ್ಲಿನ ರಾಸಾಯನಿಕ ವಸ್ತುಗಳ ಗುಣಗಳಿಗೆ ತಕ್ಕಂತೆ ಕೆಲವು ಒಗೆತಕ್ಕೆ ಜಗ್ಗುವುದಿಲ್ಲ; ಕೆಲವು ಜಗ್ಗುತ್ತವೆ.       

(ಬಿ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ